Library is a collection and organization of knowledge within the system, where system is building or electronic models; such as mobile, computer and so on. To give the satisfaction to the user needs.
Posts
ಎಲ್ಲಿ ಸಲ್ಲಲ್ಲಿ ನಾ.....!
- Get link
- X
- Other Apps
ಎಲ್ಲಿ ಸಲ್ಲಲ್ಲಿ ತಿಳಿಯದಗಿದ್ದೆ ಯಾರ ನಂಬಲ್ಲಿ ಅರಿಯದಾಗಿದೆ ಕೇಳೋ ಕಿವಿಗಳು ಕೆಳಿಸದಾಗದಲಿ ಕಾಣೋ ಕಣ್ಣುಗಳು ಕಾಣದಾಗಲಿ......! ಎಲ್ಲಿ ಹುಡುಕಿದರೂ ಕಾಣದ ಬೆಳಕು ಏಕೋ ಈ ಬದುಕಲ್ಲಿ ಕತ್ತಲೆ ತುಂಬಿದೆ ಯಾವ ಪ್ರಪಾತದಲ್ಲಿ ಜಾರಿ ಬಿಳುವೇನೋ ಮನದಲ್ಲಿ ವ್ಯಥೆ ತುಂಬಿದೆ ಯಾರ ಮುಂದೆಯೂ ತೆರೆಯದಗಿದೆ ಈ ನನ್ನ ಮನವಾ.................! ಏನನೋ ಅರಿಯಲು ಹೋಗಿ ಏನನೋ ತಿ ಳಿ ದಂತಗಿದೆ ಯಾರನೋ ಖುಷಿಸಲು ಹೋಗಿ ಯಾರಿಗೋ ನೋವು ಉಂಟಾಗಿದ್ದೆ...! ಎಲ್ಲಿ ಸಲ್ಲಿದರು ಯಾರಿಗೋ ಏನೋ ನನ್ನಗಂತೂ ತಿಳಿಯದಾಗಿದೆ ಎಲ್ಲಿ ಸಾಲಲ್ಲಿ ನಾ..........?
ನಾ ಕಾಯುತಲಿರುವೆ ಅವನ ಹೆಜ್ಜೆಗೆ : ಅವ ನಡೆಯಲಿ ನನ್ನೊಂದಿಗೆ...!
- Get link
- X
- Other Apps
ನಾ ಕಾಯುತಿದ್ದೆ ಒಂದು ಸುಂದರ ಗೆಳತನಕ್ಕಾಗಿ ಸಿಕ್ಕಾಗ ಅರಿವೆ ಆಗಲಿಲ್ಲ ಅದು ನಾ ಬಯಸಿದ ಗೆಳೆತನವೆಂದು ತಮಾಷೆಯ ಮಾತುಗಳೇ ತುಂಬಿತ್ತು ಅಲ್ಲಿ ಅವ ತೋರಿದ ಕಾಳಜಿ ಹೆಚ್ಚಾಗಿ ಅಲ್ಲಿಂದ ಹೊರ ನಡೆಯಿತು ನನ್ನ ಮನ...! ಒಂದೊಂದು ಹೆಜ್ಜೆಯು ದೂರ ನೆಡೆದು ಬಿಟ್ಟೆ ಹೆಜ್ಜೆ ಇಡುವಾಗ ಹೊಸಬರ ಪರಿಚಯವಾಗುತ್ತಿತ್ತು ಅವರಾ ನುಡಿಗಳು ಇಂಪಾಗಿ ಕೇಳುತ್ತಿತ್ತು ಇವ ತೋರಿದ ಹೃದಯದ ಮಾತುಗಳಿಗೆ ಪ್ರತಿಕ್ರಿಯಸಲಿಲ್ಲ ಈ ನನ್ನ ಮನ ಕಳೆದುಕೊಂಡೆ ಅವನ ನಾ...! ಕಳೆದುಕೊಂಡ ಮೇಲೆ ಅರಿವಾಗುತ್ತಿತ್ತು ಅವನೆದೆ ಮಿಡಿತದ ನುಡಿಗಳು ನಾ ಕಾಣಿಸದಷ್ಟು ದೂರ ನಡೆದಿದ್ದೆ ಹುಡುಕಿದೆ ಮನದಲ್ಲಿ ಅವನ ಕಾಯುತ್ತಿದ್ದೆ ಅವನ ಬರುವಿಕೆಗಾಗಿ ಸಿಕ್ಕನು ಅವನು ಕೊನೆಗೂ ನನಗೆ ಕೇವಲ ಮಾತಾಗಿ...! ನಾ ಮಾಡಿದ ತಪ್ಪಿನ ಅರಿವಾಗಿದೆ ಮತ್ತೆ ನಾ ವಂಚಿಸಲಾರೆ ಅವನಿಗೆ ಆದರೆ ಅವ ನಂಬನು ನನ್ನ ಈಗ ಒಂದೇ ದಾರಿ ಮತ್ತೆ ಅವನಿಂದ ದೊರ ಸರಿಯುವುದು...! ಬೇರೆಯಾದ ಹೆಜ್ಜೆಗಳನ್ನ ಹೇಗೆ ಸೇರಿಸಲಿ ಮತ್ತೆ ನಾ ಹೊರಡುವೆ ಒಂಟಿ ಹೆಜ್ಜೆ ಇಡುತ್ತಾ ಅವ...
ಮರೆತರೆ ನೆನಪಾಗದು ...!
- Get link
- X
- Other Apps
ಮರೆತರೆ ನೆನಪಾಗದು ಮನದಾಳದ ಮಾತು, ಮರೆತೆನೆಂದು ತಿಳಿದರೆ ನೆನಪಾಗದೆ ಇರದು ಮನದ ನೆನಪುಗಳು. ಮರೆವು ಎಂಬುದು ಒಂದು ವರವಾದರೆ, ನೆನಪು ಎಂಬುದು ರೋಮಾಂಚನ. ಮರೆಯ ಬೇಕೆಂಬುದು ನೆನಪಾಗಿ ಕಾಡುವುದು, ನೆನೆಯ ಬೇಕೆಂಬುದು ಮರೆತು ಹೋಗುವುದು. ಈ ಎರಡು ನಮ್ಮ ಜೀವನದಿ ಇರದಿದ್ದರೆ, ಜೀವನದ ಅರ್ಥವೇ ತಿಳಿಯದು. ಮರೆತು ಹೋದರೆ ನೆನಪಾಗುವ ಮಾತುಗಳೇ ಬರುವುದಿಲ್ಲ, ಮರೆಯುವ ಬಿರುಸಿನಲ್ಲಿ ನೆನಪಾಗದೇ ಇರುವುದಿಲ್ಲ. ಈ ಮರೆವು, ನೆನಪು ಯಾವಾಗಲೂ ಮರೆಯಾಗದೆ,ನೆನಪಾಗದೆ, ನಮ್ಮೊಳಗೇ ನಶಿಸದೆ ಜೀವಿಸುತ್ತದೆ. ಮರೆತರೆ ಮರೆಯಗದು, ನೆನದರೆ ನೆನಪಾಗದು ಈ ಎರಡನ್ನು ಮಾಡದೇ ಬದುಕಲಾಗದು. ಮರೆತರೆ ನೆನಪಗದು ನೆನಪುಗಳು. ನೆನೆಯದೆ ಹೋದರೆ ಮರೆಯಗದು ಮನದಾಳದ ಮಾತು, ಯಾರ ಮುಂದೆ ನಾ ತೆರೆಯಲಿ ಮನದಾಳದ ಮಾತು?