ಎಲ್ಲಿ ಸಲ್ಲಲ್ಲಿ ನಾ.....!

ಎಲ್ಲಿ ಸಲ್ಲಲ್ಲಿ ತಿಳಿಯದಗಿದ್ದೆ 
ಯಾರ ನಂಬಲ್ಲಿ ಅರಿಯದಾಗಿದೆ 
ಕೇಳೋ ಕಿವಿಗಳು ಕೆಳಿಸದಾಗದಲಿ 
ಕಾಣೋ ಕಣ್ಣುಗಳು ಕಾಣದಾಗಲಿ......!

ಎಲ್ಲಿ ಹುಡುಕಿದರೂ ಕಾಣದ ಬೆಳಕು
ಏಕೋ ಈ ಬದುಕಲ್ಲಿ ಕತ್ತಲೆ ತುಂಬಿದೆ 
ಯಾವ ಪ್ರಪಾತದಲ್ಲಿ ಜಾರಿ ಬಿಳುವೇನೋ
ಮನದಲ್ಲಿ ವ್ಯಥೆ ತುಂಬಿದೆ
ಯಾರ ಮುಂದೆಯೂ ತೆರೆಯದಗಿದೆ 
  ಈ ನನ್ನ ಮನವಾ.................!

ಏನನೋ ಅರಿಯಲು ಹೋಗಿ 
ಏನನೋ ತಿಳಿದಂತಗಿದೆ
ಯಾರನೋ ಖುಷಿಸಲು ಹೋಗಿ 
ಯಾರಿಗೋ ನೋವು ಉಂಟಾಗಿದ್ದೆ...!

ಎಲ್ಲಿ ಸಲ್ಲಿದರು ಯಾರಿಗೋ ಏನೋ
ನನ್ನಗಂತೂ ತಿಳಿಯದಾಗಿದೆ
ಎಲ್ಲಿ ಸಾಲಲ್ಲಿ ನಾ..........?

Comments

Popular posts from this blog

ಕ್ಷಮಿಸಿಬಿಡು ಕಂದ ಈ ನಿನ್ನ ಅಮ್ಮನ !