ಕ್ಷಮಿಸಿಬಿಡು ಕಂದ ಈ ನಿನ್ನ ಅಮ್ಮನ !




ಓ ನನ್ನ ಮುದ್ದು ಕಂದ ಸ್ವಾಲಂಬಿಯಾಗುವ ಆಸೆಯಿಂದ 

ದುಡಿಮೆಯಿಂದ ಓಡುತಿರುವ ಅಮ್ಮನ !

ಭವಿಷ್ಯಕ್ಕೆ ಕೂಡಿ ಇಡುವ ನಿಧಿಗೆ 

ಈ ನಿಧಿಯ ಬಿಟ್ಟು ಓಡುತಿರುವ ಅಮ್ಮನ !

ಸಮಯವಿಲ್ಲ ಎಂದು ಹೇಳಿ ಸಮಯಕ್ಕೆ ಕಾಲು ಕಟ್ಟಿ

ಸಮಯ ನೀಡದೆ ಓಡುತಿರುವ ಅಮ್ಮನ !

ಖಾಯಿಲೆಗೆ ಔಷಧಿ ತಂದು ಕೊಟ್ಟು 

ಔಷಧಿ ಕುಡಿಸದೆ  ಓಡುತಿರುವ ಅಮ್ಮನ !

ಅಡುಗೆ ಮಾಡದೇ ತುತ್ತು ನೀಡದೆ 

ಅಜ್ಜಿಯೇ ನಿನ್ನಗೆ ಎಂದು ಹೇಳಿ ಓಡುತಿರುವ ಅಮ್ಮನ !

ಪಾಲನೆ ಮಾಡದೇ ಲಾಲಿ ಹಾಡದೆ 

ಕೆಲಸದಲ್ಲಿ ನ್ಯೂನತೆ ಬರದಂತೆ ಓಡುತಿರುವ ಅಮ್ಮನ !

ವರ್ತಮಾನ ಬಿಟ್ಟು ಭವಿಷ್ಯಕ್ಕೆ  ಓಡುತಿರುವ

 ಈ ನಿನ್ನ ಅಮ್ಮನ ಮನಸಾರೆ ಒಮ್ಮೆ 

ಕ್ಷಮಿಸಿಬಿಡು ಮಗು ಸಾಕು ನನಗೆ

Comments

Popular posts from this blog

ಮರೆತರೆ ನೆನಪಾಗದು ...!

ಮರಣವೇ ನಮ್ಮ ಪಯಣವೇ...............?