Posts

ಕ್ಷಮಿಸಿಬಿಡು ಕಂದ ಈ ನಿನ್ನ ಅಮ್ಮನ !

Image
ಓ ನನ್ನ ಮುದ್ದು ಕಂದ ಸ್ವಾಲಂಬಿಯಾಗುವ ಆಸೆಯಿಂದ  ದುಡಿಮೆಯಿಂದ ಓಡುತಿರುವ ಅಮ್ಮನ ! ಭವಿಷ್ಯಕ್ಕೆ ಕೂಡಿ ಇಡುವ ನಿಧಿಗೆ  ಈ ನಿಧಿಯ ಬಿಟ್ಟು ಓಡುತಿರುವ ಅಮ್ಮನ ! ಸಮಯವಿಲ್ಲ ಎಂದು ಹೇಳಿ ಸಮಯಕ್ಕೆ ಕಾಲು ಕಟ್ಟಿ ಸಮಯ ನೀಡದೆ ಓಡುತಿರುವ ಅಮ್ಮನ ! ಖಾಯಿಲೆಗೆ ಔಷಧಿ ತಂದು ಕೊಟ್ಟು  ಔಷಧಿ ಕುಡಿಸದೆ  ಓಡುತಿರುವ ಅಮ್ಮನ ! ಅಡುಗೆ ಮಾಡದೇ ತುತ್ತು ನೀಡದೆ  ಅಜ್ಜಿಯೇ ನಿನ್ನಗೆ ಎಂದು ಹೇಳಿ ಓಡುತಿರುವ ಅಮ್ಮನ ! ಪಾಲನೆ ಮಾಡದೇ ಲಾಲಿ ಹಾಡದೆ  ಕೆಲಸದಲ್ಲಿ ನ್ಯೂನತೆ ಬರದಂತೆ ಓಡುತಿರುವ ಅಮ್ಮನ ! ವರ್ತಮಾನ ಬಿಟ್ಟು ಭವಿಷ್ಯಕ್ಕೆ  ಓಡುತಿರುವ  ಈ ನಿನ್ನ ಅಮ್ಮನ ಮನಸಾರೆ ಒಮ್ಮೆ  ಕ್ಷಮಿಸಿಬಿಡು ಮಗು ಸಾಕು ನನಗೆ
Library is a collection and organization of knowledge within the system, where system is building or electronic models; such as mobile, computer and so on. To give the satisfaction to the user needs.

ಎಲ್ಲಿ ಸಲ್ಲಲ್ಲಿ ನಾ.....!

ಎಲ್ಲಿ ಸಲ್ಲಲ್ಲಿ ತಿಳಿಯದಗಿದ್ದೆ  ಯಾರ ನಂಬಲ್ಲಿ ಅರಿಯದಾಗಿದೆ  ಕೇಳೋ ಕಿವಿಗಳು ಕೆಳಿಸದಾಗದಲಿ  ಕಾಣೋ ಕಣ್ಣುಗಳು ಕಾಣದಾಗಲಿ......! ಎಲ್ಲಿ ಹುಡುಕಿದರೂ ಕಾಣದ ಬೆಳಕು ಏಕೋ ಈ ಬದುಕಲ್ಲಿ ಕತ್ತಲೆ ತುಂಬಿದೆ  ಯಾವ ಪ್ರಪಾತದಲ್ಲಿ ಜಾರಿ ಬಿಳುವೇನೋ ಮನದಲ್ಲಿ ವ್ಯಥೆ ತುಂಬಿದೆ ಯಾರ ಮುಂದೆಯೂ ತೆರೆಯದಗಿದೆ    ಈ ನನ್ನ ಮನವಾ.................! ಏನನೋ ಅರಿಯಲು ಹೋಗಿ  ಏನನೋ ತಿ ಳಿ ದಂತಗಿದೆ ಯಾರನೋ ಖುಷಿಸಲು ಹೋಗಿ  ಯಾರಿಗೋ ನೋವು ಉಂಟಾಗಿದ್ದೆ...! ಎಲ್ಲಿ ಸಲ್ಲಿದರು ಯಾರಿಗೋ ಏನೋ ನನ್ನಗಂತೂ ತಿಳಿಯದಾಗಿದೆ ಎಲ್ಲಿ ಸಾಲಲ್ಲಿ ನಾ..........?

ಮರಣವೇ ನಮ್ಮ ಪಯಣವೇ...............?

ಗೆಳತದ ಹೆಸರಿನಲ್ಲಿ ಸ್ನೇಹ  ಸ್ನೇಹದ  ಹೆಸರಿನಲ್ಲಿ ಪ್ರೀತಿ   ಪ್ರೀತಿಯ ಹೆಸರಿನಲ್ಲಿ  ಅಸೂಯೆ  ಅಸೂಯೆ ಹೆಸರಿನಲ್ಲಿ  ದ್ವೇಷ  ದ್ವೇಷದ ಹೆಸರಿನಲ್ಲಿ  ಕೋಪ  ಕೋಪದ ಹೆಸರಿನಲ್ಲಿ  ಮರಣ  ಮರಣವೇ ನಮ್ಮ ಪಯಣವೇ...............?

ನಾ ಕಾಯುತಲಿರುವೆ ಅವನ ಹೆಜ್ಜೆಗೆ : ಅವ ನಡೆಯಲಿ ನನ್ನೊಂದಿಗೆ...!

ನಾ ಕಾಯುತಿದ್ದೆ ಒಂದು ಸುಂದರ ಗೆಳತನಕ್ಕಾಗಿ ಸಿಕ್ಕಾಗ ಅರಿವೆ ಆಗಲಿಲ್ಲ ಅದು ನಾ ಬಯಸಿದ ಗೆಳೆತನವೆಂದು ತಮಾಷೆಯ ಮಾತುಗಳೇ ತುಂಬಿತ್ತು ಅಲ್ಲಿ ಅವ ತೋರಿದ ಕಾಳಜಿ ಹೆಚ್ಚಾಗಿ ಅಲ್ಲಿಂದ          ಹೊರ ನಡೆಯಿತು ನನ್ನ ಮನ...! ಒಂದೊಂದು ಹೆಜ್ಜೆಯು ದೂರ ನೆಡೆದು ಬಿಟ್ಟೆ ಹೆಜ್ಜೆ ಇಡುವಾಗ ಹೊಸಬರ ಪರಿಚಯವಾಗುತ್ತಿತ್ತು ಅವರಾ ನುಡಿಗಳು ಇಂಪಾಗಿ ಕೇಳುತ್ತಿತ್ತು ಇವ ತೋರಿದ ಹೃದಯದ ಮಾತುಗಳಿಗೆ ಪ್ರತಿಕ್ರಿಯಸಲಿಲ್ಲ ಈ ನನ್ನ ಮನ              ಕಳೆದುಕೊಂಡೆ ಅವನ ನಾ...! ಕಳೆದುಕೊಂಡ  ಮೇಲೆ ಅರಿವಾಗುತ್ತಿತ್ತು ಅವನೆದೆ ಮಿಡಿತದ ನುಡಿಗಳು ನಾ ಕಾಣಿಸದಷ್ಟು ದೂರ ನಡೆದಿದ್ದೆ ಹುಡುಕಿದೆ ಮನದಲ್ಲಿ ಅವನ ಕಾಯುತ್ತಿದ್ದೆ ಅವನ ಬರುವಿಕೆಗಾಗಿ ಸಿಕ್ಕನು ಅವನು ಕೊನೆಗೂ ನನಗೆ              ಕೇವಲ ಮಾತಾಗಿ...! ನಾ ಮಾಡಿದ ತಪ್ಪಿನ ಅರಿವಾಗಿದೆ ಮತ್ತೆ ನಾ ವಂಚಿಸಲಾರೆ ಅವನಿಗೆ ಆದರೆ ಅವ ನಂಬನು ನನ್ನ ಈಗ ಒಂದೇ ದಾರಿ            ಮತ್ತೆ ಅವನಿಂದ ದೊರ ಸರಿಯುವುದು...! ಬೇರೆಯಾದ ಹೆಜ್ಜೆಗಳನ್ನ ಹೇಗೆ ಸೇರಿಸಲಿ ಮತ್ತೆ ನಾ ಹೊರಡುವೆ ಒಂಟಿ ಹೆಜ್ಜೆ ಇಡುತ್ತಾ ಅವ ಯಾವಾಗ ಹೃದಯದಿ ಕರೇವನೂ           ನನ್ನ ಹೆಜ್ಜೆ ಅವನೆಡೆಗೆ...!                                ನಾ ಕಾಯುತಲಿರುವೆ ಅವನ ಹೆಜ್ಜೆಗೆ :                                                            ಅವ ನಡೆಯಲಿ ನನ್ನೊಂದಿಗೆ...!

ಮರೆತರೆ ನೆನಪಾಗದು ...!

ಮರೆತರೆ ನೆನಪಾಗದು   ಮನದಾಳದ ಮಾತು, ಮರೆತೆನೆಂದು ತಿಳಿದರೆ ನೆನಪಾಗದೆ ಇರದು ಮನದ ನೆನಪುಗಳು. ಮರೆವು ಎಂಬುದು ಒಂದು ವರವಾದರೆ, ನೆನಪು ಎಂಬುದು ರೋಮಾಂಚನ.  ಮರೆಯ ಬೇಕೆಂಬುದು ನೆನಪಾಗಿ ಕಾಡುವುದು, ನೆನೆಯ  ಬೇಕೆಂಬುದು ಮರೆತು ಹೋಗುವುದು. ಈ ಎರಡು ನಮ್ಮ ಜೀವನದಿ ಇರದಿದ್ದರೆ, ಜೀವನದ ಅರ್ಥವೇ  ತಿಳಿಯದು.  ಮರೆತು ಹೋದರೆ ನೆನಪಾಗುವ ಮಾತುಗಳೇ ಬರುವುದಿಲ್ಲ, ಮರೆಯುವ ಬಿರುಸಿನಲ್ಲಿ ನೆನಪಾಗದೇ ಇರುವುದಿಲ್ಲ. ಈ ಮರೆವು, ನೆನಪು ಯಾವಾಗಲೂ ಮರೆಯಾಗದೆ,ನೆನಪಾಗದೆ, ನಮ್ಮೊಳಗೇ ನಶಿಸದೆ ಜೀವಿಸುತ್ತದೆ.  ಮರೆತರೆ ಮರೆಯಗದು, ನೆನದರೆ ನೆನಪಾಗದು ಈ ಎರಡನ್ನು ಮಾಡದೇ ಬದುಕಲಾಗದು. ಮರೆತರೆ ನೆನಪಗದು ನೆನಪುಗಳು. ನೆನೆಯದೆ ಹೋದರೆ ಮರೆಯಗದು ಮನದಾಳದ ಮಾತು, ಯಾರ ಮುಂದೆ ನಾ ತೆರೆಯಲಿ ಮನದಾಳದ ಮಾತು?