Posts

Showing posts from 2011

ಮರಣವೇ ನಮ್ಮ ಪಯಣವೇ...............?

ಗೆಳತದ ಹೆಸರಿನಲ್ಲಿ ಸ್ನೇಹ  ಸ್ನೇಹದ  ಹೆಸರಿನಲ್ಲಿ ಪ್ರೀತಿ   ಪ್ರೀತಿಯ ಹೆಸರಿನಲ್ಲಿ  ಅಸೂಯೆ  ಅಸೂಯೆ ಹೆಸರಿನಲ್ಲಿ  ದ್ವೇಷ  ದ್ವೇಷದ ಹೆಸರಿನಲ್ಲಿ  ಕೋಪ  ಕೋಪದ ಹೆಸರಿನಲ್ಲಿ  ಮರಣ  ಮರಣವೇ ನಮ್ಮ ಪಯಣವೇ...............?

ನಾ ಕಾಯುತಲಿರುವೆ ಅವನ ಹೆಜ್ಜೆಗೆ : ಅವ ನಡೆಯಲಿ ನನ್ನೊಂದಿಗೆ...!

ನಾ ಕಾಯುತಿದ್ದೆ ಒಂದು ಸುಂದರ ಗೆಳತನಕ್ಕಾಗಿ ಸಿಕ್ಕಾಗ ಅರಿವೆ ಆಗಲಿಲ್ಲ ಅದು ನಾ ಬಯಸಿದ ಗೆಳೆತನವೆಂದು ತಮಾಷೆಯ ಮಾತುಗಳೇ ತುಂಬಿತ್ತು ಅಲ್ಲಿ ಅವ ತೋರಿದ ಕಾಳಜಿ ಹೆಚ್ಚಾಗಿ ಅಲ್ಲಿಂದ          ಹೊರ ನಡೆಯಿತು ನನ್ನ ಮನ...! ಒಂದೊಂದು ಹೆಜ್ಜೆಯು ದೂರ ನೆಡೆದು ಬಿಟ್ಟೆ ಹೆಜ್ಜೆ ಇಡುವಾಗ ಹೊಸಬರ ಪರಿಚಯವಾಗುತ್ತಿತ್ತು ಅವರಾ ನುಡಿಗಳು ಇಂಪಾಗಿ ಕೇಳುತ್ತಿತ್ತು ಇವ ತೋರಿದ ಹೃದಯದ ಮಾತುಗಳಿಗೆ ಪ್ರತಿಕ್ರಿಯಸಲಿಲ್ಲ ಈ ನನ್ನ ಮನ              ಕಳೆದುಕೊಂಡೆ ಅವನ ನಾ...! ಕಳೆದುಕೊಂಡ  ಮೇಲೆ ಅರಿವಾಗುತ್ತಿತ್ತು ಅವನೆದೆ ಮಿಡಿತದ ನುಡಿಗಳು ನಾ ಕಾಣಿಸದಷ್ಟು ದೂರ ನಡೆದಿದ್ದೆ ಹುಡುಕಿದೆ ಮನದಲ್ಲಿ ಅವನ ಕಾಯುತ್ತಿದ್ದೆ ಅವನ ಬರುವಿಕೆಗಾಗಿ ಸಿಕ್ಕನು ಅವನು ಕೊನೆಗೂ ನನಗೆ              ಕೇವಲ ಮಾತಾಗಿ...! ನಾ ಮಾಡಿದ ತಪ್ಪಿನ ಅರಿವಾಗಿದೆ ಮತ್ತೆ ನಾ ವಂಚಿಸಲಾರೆ ಅವನಿಗೆ ಆದರೆ ಅವ ನಂಬನು ನನ್ನ ಈಗ ಒಂದೇ ದಾರಿ            ಮತ್ತೆ ಅವನಿಂದ ದೊರ ಸರಿಯುವುದು...! ಬೇರೆಯಾದ ಹೆಜ್ಜೆಗಳನ್ನ ಹೇಗೆ ಸೇರಿಸಲಿ ಮತ್ತೆ ನಾ ಹೊರಡುವೆ ಒಂಟಿ ಹೆಜ್ಜೆ ಇಡುತ್ತಾ ಅವ ಯಾವಾಗ ಹೃದಯದಿ ಕರೇವನೂ           ನನ್ನ ಹೆಜ್ಜೆ ಅವನೆಡೆಗೆ...!                                ನಾ ಕಾಯುತಲಿರುವೆ ಅವನ ಹೆಜ್ಜೆಗೆ :                                                            ಅವ ನಡೆಯಲಿ ನನ್ನೊಂದಿಗೆ...!

ಮರೆತರೆ ನೆನಪಾಗದು ...!

ಮರೆತರೆ ನೆನಪಾಗದು   ಮನದಾಳದ ಮಾತು, ಮರೆತೆನೆಂದು ತಿಳಿದರೆ ನೆನಪಾಗದೆ ಇರದು ಮನದ ನೆನಪುಗಳು. ಮರೆವು ಎಂಬುದು ಒಂದು ವರವಾದರೆ, ನೆನಪು ಎಂಬುದು ರೋಮಾಂಚನ.  ಮರೆಯ ಬೇಕೆಂಬುದು ನೆನಪಾಗಿ ಕಾಡುವುದು, ನೆನೆಯ  ಬೇಕೆಂಬುದು ಮರೆತು ಹೋಗುವುದು. ಈ ಎರಡು ನಮ್ಮ ಜೀವನದಿ ಇರದಿದ್ದರೆ, ಜೀವನದ ಅರ್ಥವೇ  ತಿಳಿಯದು.  ಮರೆತು ಹೋದರೆ ನೆನಪಾಗುವ ಮಾತುಗಳೇ ಬರುವುದಿಲ್ಲ, ಮರೆಯುವ ಬಿರುಸಿನಲ್ಲಿ ನೆನಪಾಗದೇ ಇರುವುದಿಲ್ಲ. ಈ ಮರೆವು, ನೆನಪು ಯಾವಾಗಲೂ ಮರೆಯಾಗದೆ,ನೆನಪಾಗದೆ, ನಮ್ಮೊಳಗೇ ನಶಿಸದೆ ಜೀವಿಸುತ್ತದೆ.  ಮರೆತರೆ ಮರೆಯಗದು, ನೆನದರೆ ನೆನಪಾಗದು ಈ ಎರಡನ್ನು ಮಾಡದೇ ಬದುಕಲಾಗದು. ಮರೆತರೆ ನೆನಪಗದು ನೆನಪುಗಳು. ನೆನೆಯದೆ ಹೋದರೆ ಮರೆಯಗದು ಮನದಾಳದ ಮಾತು, ಯಾರ ಮುಂದೆ ನಾ ತೆರೆಯಲಿ ಮನದಾಳದ ಮಾತು?