ಮರೆತರೆ ನೆನಪಾಗದು ...!
ಮರೆತರೆ ನೆನಪಾಗದು ಮನದಾಳದ ಮಾತು, ಮರೆತೆನೆಂದು ತಿಳಿದರೆ ನೆನಪಾಗದೆ ಇರದು ಮನದ ನೆನಪುಗಳು. ಮರೆವು ಎಂಬುದು ಒಂದು ವರವಾದರೆ, ನೆನಪು ಎಂಬುದು ರೋಮಾಂಚನ. ಮರೆಯ ಬೇಕೆಂಬುದು ನೆನಪಾಗಿ ಕಾಡುವುದು, ನೆನೆಯ ಬೇಕೆಂಬುದು ಮರೆತು ಹೋಗುವುದು. ಈ ಎರಡು ನಮ್ಮ ಜೀವನದಿ ಇರದಿದ್ದರೆ, ಜೀವನದ ಅರ್ಥವೇ ತಿಳಿಯದು. ಮರೆತು ಹೋದರೆ ನೆನಪಾಗುವ ಮಾತುಗಳೇ ಬರುವುದಿಲ್ಲ, ಮರೆಯುವ ಬಿರುಸಿನಲ್ಲಿ ನೆನಪಾಗದೇ ಇರುವುದಿಲ್ಲ. ಈ ಮರೆವು, ನೆನಪು ಯಾವಾಗಲೂ ಮರೆಯಾಗದೆ,ನೆನಪಾಗದೆ, ನಮ್ಮೊಳಗೇ ನಶಿಸದೆ ಜೀವಿಸುತ್ತದೆ. ಮರೆತರೆ ಮರೆಯಗದು, ನೆನದರೆ ನೆನಪಾಗದು ಈ ಎರಡನ್ನು ಮಾಡದೇ ಬದುಕಲಾಗದು. ಮರೆತರೆ ನೆನಪಗದು ನೆನಪುಗಳು. ನೆನೆಯದೆ ಹೋದರೆ ಮರೆಯಗದು ಮನದಾಳದ ಮಾತು, ಯಾರ ಮುಂದೆ ನಾ ತೆರೆಯಲಿ ಮನದಾಳದ ಮಾತು?